Monday, June 15, 2009

ಮೆರವಣಿಗೆ ...........


ಮರೆತ ಆ ದಿನಗಳ,
ನೆನಪಿಸೋ
ಗಡಿಯಾರ ನೋಡಿ... ಮರೆತಿಲ್ಲ ಯಾವುದೇ ಗಡಿಗಳ....................

ಕಳೆದ
ದಾರಿಗೆ, ಬಾಲ್ಯ ಎನ್ನಬಹುದೇ?
ಬೆಳೆದ
ಕೇರಿಗೆ, ಕೋಟೆ ಅನ್ನ ಬಹುದೇ? ಎಲ್ಲ ಕಾವಲು ದಾಟಿ...................... ಬರಬಹುದೇ ಕನಸ ಊರಿಗೆ,
ಕಣ್ಣ
ಬಾಗಿಲ ತೆರೆಸದೇನೆ!!!!!!!!!!


ಕಂಡ ಹುಡುಗಿಗೆ,
ಚೆಲುವೆನ್ನ ಬಹುದೇ?
ಮೊಂಡ ಮನಸಿಗೆ,
ಚಾಟಿಯ ಬೀಸ ಬಹುದೇ?

ತುಂಬಿದ ಕಣ್ಣ ಹನಿಗೆ,
ಹೊರ ಬಾರದ ದುಃಖ...
ಮರೆತು ಹೋದ ಹೆಣ್ಣಿಗೆ,
ದೂರ ಸರಿದ ಮುಖ.....
ಮರೆತೆಯಲ್ಲಾ, ಸಾಕಿನ್ನು..ನೆನಪ ....................
ಮೆರವಣಿಗೆ >>...............

Sunday, June 14, 2009

ಅಮ್ಮ .........


ಅಳುವಾಗ ಅಮ್ಮ ನಿನ್ನ ನೆನಪೇ...
ಮಲಗೋ ಮುನ್ನ ನನ್ನೇ ಹರಸೇ..
ಬರದಿರಲಿ ಯಾವುದೇ ಭೀತಿ,
ಅದಕಿಂತ ಮಿಗಿಲಿಲ್ಲ ಯಾವುದೇ ಪ್ರೀತಿ...
ತೊಟ್ಟಿಲ್ಲಲ್ಲೇ ಮಲಗೋ..ಆಸೆ!!!!!!!!!!

ಹೊಸ ಕವನಗಳ ಬಿಡುಗಡೆ!!!!!!!!!!!!!

ಬದುಕಲಿ ಬಾಡದ ಹೂವ,
ಬೆಳೆಸುವ ಮಾಲಿಯೂ ಆಗಿ..
ಹದವ ಮಾಡದ, ಮಣ್ಣ ಮನಕೆ,
ಮೆದುವಾಗಿ ಗುದ್ದಲಿ ತಗಲಿ......

ನೋವೆ ಆದರೂ ಕೂಡ,
ಹೂವೆ ಬರುವಾಗ..ನೋಡಿ...
ಆಗಲೀ ಸಾವಿರ ಹೋರಾಟ!!!!!!!!!!!

ಗ.ಕಿರಣ್

Monday, April 13, 2009

ಕಾಲ..

ಕಾಲ ಕಳೆದು ಹೋಗುತಿದೆ,
ನನಗಾಗಿ ಕಾಯದೆ....
ನಾಳೆ ಎಂಬುದು, ಬರುತಲೇ ಇದೆ..
ಯಾವ ಕೊನೆಯೂ ಇಲ್ಲದೇ...

ನೆನ್ನೆ ಕಾದು ಕುಳಿತ..ಘಳಿಗೆ
ಇನ್ನೂ ಮರೆತು ಹೋಗಿಲ್ಲ...
ನೀನೆ ಬಂದು ಕರೆಯುವ..ಗಳಿಗೆ..
ಇನ್ನೂ ಬರಲೇ ಇಲ್ಲ............

ಕೂತು ಹೋದ..ಜಾಗ...ಮತ್ತೆ ಮತ್ತೆ
ಕೇಳಿದೆ....
ಮರೆತು ಬಂದೆ ಯಾಕೆ ಎಂದು...
ಮರಳಿ ಕಳಿಸಿದೆ....

ನಿನ್ನ ಬಿಟ್ಟು ಹೋಗೋ..ಆಸೆ...
ಹೋಗ್ಲಿ..ಬಾರೆಲೈ..................

ಗ ಕಿರಣ

Sunday, April 12, 2009

ಅಂದು ಕೊಂಡೆ!!!!!!!!!!

ಹುಡುಗ ಒಳ್ಳೆಯವ,
ಅಂದು ಕೊಂಡೆ......
ನೋಡಿದರೆ...ಹೃದಯವೋ....
ಕಲ್ಲು ಬಂಡೆ

ಪೂಜಿಸಲು ಗೊತ್ತಿಲ್ಲ ..
ಸೇವಿಸಲು..ಬರುತ್ತಿಲ್ಲ....
ಯಾಕೆ ಈ ರೀತಿಯೇ??????...
ಬೇಕಿಲ್ಲ.. ಅವನಿಗೆ....ಯಾವುದೇ...
ರಿಯಾಯಿತಿಯೇ....

ಗ . ಕಿರಣ

ಕಥೆ....

ನಾನೇ ಬರೆದ ಕಥೆಯು ಇಂದು.....

ಕೊನೆಗೆ ಬಂದು, ನಿಂತಿದೆ...

ವಿರಹವೋ, ಸನಿಹವೋ....

ನೋವನಂತೂ, ನೀಡಿದೆ...

ನಡೆದು ಬಂದ ದಾರಿ ...

ಯಾಕೋ, ಒಂಟಿಯಾಗಿ ಹೋಗಿದೆ,

ಮರಳಿ ಹೋಗೋ, ಆಸೆಯಾದರೂ...

ಸೇತುವೆಯೇ ಮುರಿದಿದೆ....

ಬರೆಯಲೇ, ಬೇಕು ..ಕೊನೆಯ ಸಾಲು...

ಮುಗಿಸಲೇ, ಬೇಕು..ಪಯಣದ..ಪಾಲು...

ನನಗೂ, ನಿನಗೂ, ಇಬ್ಬರಿಗೂ..

ಬರಲಿ ಹೊಸ ಊರು

ತರಲಿ..ಬದುಕಲಿ..

ನೆಮ್ಮದಿ ಚೂರು.....

ಗ . ಕಿರಣ

ನೀನೇ ಬರುವೆಯಾ?

ಕಣ್ಣು ಮುಚ್ಚಿ ಕಣೋ..ಕನಸು..
ಬೇಡ ನಂಗೆ..ಎಂದೂ ಗೆಳತಿ...

ನನ್ನ ಕದ್ದು ಮುಚ್ಚಿ..ಕಾಣೋ..ಹುಡುಗಿ..
ಬೇಕು, ನಂಗೆ..ಎಂದೂ..ಗೆಳತಿ..
ನೀನೇ ಬರುವೆಯಾ?...........

ಯಾವ ಹುಡುಗಿ ಮಾತು ಕೇಳಿ,
ಪ್ರೀತಿ ಮಾಡೋ ಹುಡುಗ ಅಲ್ಲ ನಾನು...
ನೀನು ಬಂದು..'ಕಾಡೋ' ಅಂತ....ಕೇಳುವಾಗ,
ಹೇಗೆ ಇರಲಿ..ನೀನೇ ...ಹೇಳು..........

ನೀನೇ ಬರುವೆಯಾ?.............................

ಎಂದೂ ಮರೆಯೋ, ಹಾಗೆ ಕಾಣೆ ನಾನು..
ನಾನೇ ಬರೆಯೋ, ಕವಿತೆ ಹಾಗೆ ನೀನು...
ಬೇಕೇ,ಇಂದೇ ಆಣೆ...ಕೇಳು..
ಯಾಕೆ ...ಅದು..ನೀನೇ...ಹೇಳು..
ನೀನೇ ಬರುವೆಯಾ?.............................

ಗ .ಕಿರಣ

ಸಂ- ದೇಶ

ಇನ್ನೆಂದು ಕಾಣದಂಗೆ...
ಮುಂದೆಂದೂ ...ನೋಡದಂಗೆ
ಮರೆಯಾಗುವೇನು ಗೆಳತಿ....
ಮರಣವಾಗುವೇನು, ಒಂದೇ..
ಸತಿ..................................

ಎದೆಯಾಳ ತೊರೆದು .....
ಮನದಾಳ ಬಿರಿದು!!
ಹೊರಟಿರುವೆನು..ಜೀವವೇ...
ಇನ್ನೆಂದೂ ಬಾರನೇ.......

ಕೆಲವು ದಿನದ ಗೆಳೆಯ....
ಹಲವು ಜನ್ಮದ ಗೆಳತಿ....
ವಿದಾಯ ನಿನಗೆ...ಹೃದಯ...
ಎನಗೆ....

ಕೊನೆಯ ಸಂ-ದೇಶ..........ಕೊನೆಗಾಣುವ ಮುನ್ನ....
ಗ . ಕಿರಣ

Saturday, April 11, 2009

ಸಾಂತ್ವಾನ

ದಣಿದ ದೇಹಕ್ಕೆ ಪಾನೀಯದ..
ಸಾಂತ್ವಾನ ……….
ದಣಿದ ಮನಕ್ಕೆ , ಅವಳ
ಪ್ರೀತಿಯ ಸಾಂತ್ವಾನ …….

ಜ್ಯೂಸ್ ಇಲ್ಲದಿರೆ , ನೀರೆ ಸಾಕು …
ಕಾಸ್ ಇಲ್ಲದಿದ್ದರೂ ..ಅವಳಿಗೆ
ಸೀರೆಯೇ ಬೇಕು …

ಅದಕಾಗಿ ಎಲ್ಲ ,ನನಗಾಗಿ ಅಲ್ಲ ………
ನಾನೇನು ಅವಳ ಸ್ವಂತಾನ??????
ಅಥವಾ
ಸಂತ -ನ !!!!!!!!!!!!!!!!!!!!

ಗ . ಕಿರಣ

ಅಸ್ತ್ರ

ಹೆಣ್ಣಿಗೆ ಕಣ್ಣೀರು..
ಪ್ರಮುಖ ಅಸ್ತ್ರ...
ಗಂಡು????ಅದನ್ನೊರೆಸುವ
ಕರ-ವಸ್ತ್ರ ......


ಗ . ಕಿರಣ

ತಿಳಿಯದೇ????

ಕಳೆದು ಹೋಗೋ ಭೀತಿ ನಂಗೆ …
ನಿನ್ನದೇ ನೆನಪು ನಂಗೆ …
ಕರೆಸು ಒಮ್ಮೆ ..ಹಾಗೆ ನನ್ನೇ …
ಯಾರಿಗೂ ಕಾಣದೇ …………….
ನಂಗೂ ತಿಳಿಯದೇ !!!!!!!!!!!!!!!!!!!!!!!!!!!!

ನಾನೇ ಬರುವೆ ನಿನ್ನ ಬಳಿಗೆ …
ಕಾಣೆ ಯಾಕೆ ಹೀಗೆ ನಂಗೆ …………
ಕುಳಿತು ಕೊಂಡೆ , ಕಾಣ ಬೇಕು …….
ನಿಂಗೂ ಕಾಣದೇ!!!!!!!!!!!!!!!!!!!!!
ನಂಗೂ ತಿಳಿಯದೇ !!!!!!!!!!!!!!!!!!!!!!!!!!!!

ಪ್ರೀತಿ ಪರ್ವತ ಏರಬೇಕು …….
ಗಡಿಪಾರು ಅಗದಂಗೆ …
ಆರತಿ ಎತ್ತಿ ಕೇಳಬೇಕು … ………
ದೃಷ್ಟಿಯು ಆಗದಂಗೆ …….
ನಿಂತು ಕೂತ , ಕಲ್ಲು ನಾನು ……..
ನಿನಗೆ ತಿಳಿಯದೇ ???????????

ಗ .ಕಿರಣ

ನೀ .........

ತಂಗಾಳಿಯಂತೆ ನೀ ಬಂದೆ....
ಮನಕೆ, ಆನಂದ ತಂದೆ ..
ಕಹಿಯ ನೆನಪೇ ಬರದಂತೆ ..
ಸಿಹಿಯ ಗುಪ್ಪೆ ನೀ ತಂದೆ ..

ನೋವ ನಡುವೆ ..
ಪ್ರೀತಿಯ ಮುಲಾಮು ನಿನ್ನೊಲವೆ
ಹಚ್ಚು ಬಾ ಪ್ರೀತಿಯ ..
ಚುಚ್ಚು ಬಾ ಎದೆಯ ..
ನಿನ್ನ ಕಣ್ಣ ಸೂಜಿ ಇಂದ ..
ನೋವಾದರೂ ಏನೋ ಆನಂದ !!!!!!!!!!
ಮರೆತಿರುವೆ ಎಲ್ಲಾ … ನನ್ನ
ಜೊತೆಗಿರುವೆ ಅಲ್ಲ…

ತೊರೆಯದಿರು ಹೃದಯ ತೀರ …
ಅಪ್ಪಳಿಸುತ್ತಿರು ನನ್ನೆಡೆಗೆ ನೀರ ..
ಪ್ರೇಮ ಸಿಂಚನದಿ...
ಹೂವ ಕಂಪನದಿ …

ಮಾತಿಗೆ ಒಂದೇ ಅರ್ಥ ..
ಮೌನಕೆ ನಾನಾ ಅರ್ಥ …
ಪಿಸುಗುಡಲಿ ಹೂ ಮಾತೊಂದು ..
ಗುಟ್ಟು ಬಿಡಲಿ ..ಹೂ ಎದೆ ಇಂದು ..
ನೀ ಬರಲಿ ತಂಗಾಳಿಯಂತೆ ..
ಪ್ರೀತಿ ರಂಗೇರಿದಂತೆ …………………….

ಗ . ಕಿರಣ

ಚುಟುಕು

ಚುಟುಕು ಬಲು ಚುರುಕು ..
ಕೇಳು ಹೆಣ್ಣೇ ..
ಯಾಕೆ ಬಿಡ್ತೀಯೇ ಕಣ್ಣೇ …
ನಿನ್ನ ರೂಪ ಕಂಡು ನಾ ಸೋತೆ ..
ನಿಜ ರೂಪ ಕಂಡು ನಾ ..ಸತ್ತೆ ..

ಕಣ್ಣ ಕುಡಿ ನೋಟ ..ಸಣ್ಣ ಮೈ ಮಾಟ..
ಹೊತ್ತಾಗ ಅಬ್ಬಾ ಆ ಕಾಟ …
ಬೇಕಾಗಿತ್ತೆ ಈ ಆಟ? ಗಣೇಶ …….
ಏನು ಇಂದಿನ ವಿಶೇಷ ………

ಗ . ಕಿರಣ

ಹೃದಯ

ಬಿರಿದ ಹೃದಯ …
ತೆರೆದ ಹೃದಯ ..
ಬರಿದಾದ ಹೃದಯ ..
ಬೆರೆತಾ ಸಮಯ …….
ಬಂದೆಯಾ , ಬಿಂದ್ಯ !!!!!!
ಎಲ್ಲಿಯೇ , ಸಂಧ್ಯಾ ..

ಪ್ರೀತಿಗೆ ಕಣ್ಣು ನೀವು ..
ಜ್ಯೋತಿಗೆ ಬೆಳಕು ನೀವು....
ಕತ್ತಲೆಯ ಮಾತಿಲ್ಲ …
ಎತ್ತಲೆಯು ಬೆಳಕೆ ಎಲ್ಲ …
ಉರಿಯುತಿರಲಿ ಜ್ಯೋತಿ...
ಬೆಳಗುತಿರಲಿ ಪ್ರೀತಿ ..

ಹೃದಯ ದೇವತೆಗೆ ಬೆಳಕು …
ಎದೆಯ ಒರತೆಗೆ ಥಳುಕು ..
ಸುಡದಿರಲಿ ಜ್ಯೋತಿ ..
ಆರದಿರಲಿ ನಮ್ಮ ಪ್ರೀತಿ …
ಇರಲಿ ಎಲ್ಲೆಡೆ ಈ ಪ್ರತೀತಿ …

ಹುಡಕದಿರು ಹುಳುಕು …
ನನ್ನ ಪ್ರೀತಿಯಲಿ ..
ತಡಕದಿರು ಥಳುಕು …
ನಿನ್ನಯ ರೀತಿಯಲಿ …
ಕರಗದಿರಲಿ ಬದಕು ..
ಬೆಳಗುತಿರಲು ಹೃದಯ ..
ಸದಾ ನನ್ನೆದೆಯ ……………………….

ಗ .ಕಿರಣ

ಪಯಣ

ಗುರಿಯಿರದ ಪಯಣದಲಿ …
ಗುರುತಿರದ ದಾರಿಯಲಿ ..
ದಣಿದಿದೆ ಮನ ..
ಬಯಸಿದೆ ನಿನ್ನ ……….

ಬಾ ಬೇಗ .ತಾ ಬೇಗ ..
ಒಲವ ಧಾರೆಯ..
ಪ್ರೀತಿಯ ಅಮೃತ ಧಾರೆಯ.....

ದಹಿಸಿದೆ ಜೀವ …ಪ್ರೀತಿಯ ನೋವ …
ಅಳಿಸು ಬಾ ಗಾಯವ ..ಉಣಿಸು ಬಾ ಪ್ರೀತಿಯ …
ಮರೆತಿದೆ ಜೀವ , ಭಾವ …ಬೆರೆತಿದೆ ನವ ,ಭಾವ ..
ಸಂಕಲಿಸು , ಸಂಸ್ಕರಿಸು ..ಪ್ರೀತಿಸು ..ನನ್ನ ಸಮೀಪಿಸು …

ಎದೆಯಾಳದಿ ಹೆಕ್ಕಿ ತಂದೆ ..

ನನ್ನೊಡಲ ಪ್ರೀತಿಯ ..
ಬಂಧಿಸು ಹೃದಯ ಪಂಜರದಿ ..
ಮನದಾಳದಿ ಸೆರೆ ಸಿಕ್ಕ ಹಕ್ಕಿಯಂತೆ………..
ಹಿತವಾಗಿ ನಗಲು …ಮಿತವಾಗಿ ಸಿಗಲು !!!!!!!!!!

ಜೊತೆಯಾಗಿ ಇರಲು …
ಚಿತೆಯೇರಲು ಆಗ ಬೇಕಿಲ್ಲ ……….

ಕಂಗಾಲು ……………………………………..

ಗ .ಕಿರಣ


ಗೋರಿ

ಗೋರಿ
ಮನದ ಕನಸು ಹೃದಯ ಗೋರಿಯಲಿ ..
ಕಲ್ಲಾದ ಮನಸು ..ಕಂಗಳ
ಕಂಬನಿಯಲಿ........
ಕಾರಿರುಳ ಕನಸು ..
ಏಕಾಂಗಿ ಮನಸು ..
ಕರುಳ ಬೇನೆ ..
ಸುಡುತಿದೆ ನನ್ನೇ ……….
ಎದೆಯ ನೋವ ..
ಮರೆಸೂ ಜೀವ …
ಬಾರದೆ ದೇವ …
ತಿಳಿಯದೇ ನನ್ನ ಭಾವ ..

ಕಣ್ಣೀರ ಕಂಬನಿ ..
ಎದೆಯ ಇಬ್ಬನಿ …
ತೊಟ್ಟಿಕ್ಕುವ ತನಕ …
ಮುಗಿಯದೀ ತವಕ …
ಮಣ್ಣಾದ ಪ್ರೀತಿಗೆ …
ಕಟ್ಟಬೇಕಾದ ಸಮಾಧಿ ..
ಸಿಗಲಿಲ್ಲ ನಿನ್ನ ಸನ್ನಿಧಿ ..
ಉಸಿರಿಲ್ಲ ನನ್ನ ಜೀವದಿ…
ಬಾ ಪ್ರಿಯೇ ಬಾ………………..

ಗ .ಕಿರಣ್

ಹೆಣ್ಣು..

ಹೆಣ್ಣು ನಕ್ಕರೆ...
ಆಹಾ,,ದಂತದ...ಗೊಂಬೆ
ಅದೇ.....ಅತ್ತರೆ.........
ಅಬ್ಬಾ!! ಆಗೊಂಬೆ!!!!!!
ಗ. ಕಿರಣ್