Monday, February 7, 2011

ಒಲವ ಭೇಟಿ

ನಡೆದೇ ಬಾ, ಎದೆಯ ತೋಟಕೆ..
ಕಲ್ಲು ಮುಳ್ಳುಗಳ ಸರಿಸುವೆ..ನಿನ್ನ ಹಾದಿಗೆ ಮಲಗಿ..
ನೀನೇ ಎಲ್ಲಾ ಹೆಜ್ಜೆ ಗುರುತು ಹಾಕಿ ಇರಿಸು!!!
ಗೆಜ್ಜೆ ದನಿಯಲೇ ತುಳಿದ ನೋವ ಮರೆಸು...

ಎದೆಯ ಭಾರ ತಡೆಯಲಾರೆ ಗೆಳತಿ..
ಏಳೇ ಹೆಜ್ಜೆ ಹಾಕು ಈ ಜನುಮಕೆ,
ನೀನೇ ನನ್ನ ಒಡತಿ!!
ಇರಿಸುವೆ ಹಣೆಗೆ ನಿನ್ನ ಕೆನ್ನೆ ರಂಗನ್ನೇ!!!!!!!!!!
ನಾಚಿದಾಗ ಬೀಳುವ ಗುಳಿಯ ದೃಷ್ಟಿ ಬಟ್ಟನ್ನೇ...

ಬೇಲಿ

ನನಗೂ ತಿಳಿಸದೇ, ನಿನ್ನೆಡೆಗೆ ನಡೆದ ಹೃದಯಕೆ,
ಬೇಲಿ ಹೇಗೆ ಹಾಕಲಿ..
ಉತ್ತರ ತಿಳಿಯದೆ, ನಿನ್ನ ಬರುವಿಕೆಗೆ ಕಾದಿಹ ಪ್ರಶ್ನೆಗೆ..
ಏನೆಂದು ನಾ ಉತ್ತರಿಸಲಿ ????????????

ಖಾಲಿ ಪುಟದ ಪತ್ರಕೆ..ಮುಗುಳ್ನಗೆಯ ಸಹಿಯ ಹಾಕಿ ಕಳಿಸಿರುವೆ..
ಮನದ ಕನ್ನಡಿ ತೆರೆದು ನೋಡಿ ಹಾಕಿ ಬಿಡು, ನಿನ್ನ ಅಂಕಿತವ....
ಪ್ರೇಮದ ಪುಸ್ಥಕಕೋ, ಕಸದ ಡಬ್ಬಿಗೋ, ನೀನೆ ನಿರ್ಧರಿಸು..
ಎಲ್ಲಿಯೇ ಉಳಿದರೋ, ಅಳಿಸಲಾಗದ ಹಚ್ಚೆಯ ಹಾಕಿಸಿರುವೆ..
ಹೃದಯ ಗೋರಿಯೊಳಗೆ...
ಮರೆತೂ ಕೂಡ, ಮರೆಯಲಾರೆ..ಆ ನಿನ್ನ ನೆನಪ..

ಪ್ರೀತಿ ಮಾತು

ಎಲ್ಲಿಗೆ ಹೋಗಲಿ ನಲ್ಲೆ...
ಹುಣ್ಣಿಮೆ ಚಂದಿರನ, ಬೆಳದಿಂಗಳಂತಾ..ನಿನ್ನ ಮೊಗವ ಮರೆತು..
ನಕ್ಷತ್ರಗಳ ರಂಗವಲ್ಲಿ ಹಾಕಿರುವೆ, ಎದೆಯ ಕಲ್ಮಶವ ತೊಳೆದು...
ಸೂರ್ಯನ ಕೆಲಸಕೆ ರಾಜೀನಾಮೆ ಕೊಡಿಸಿ, ಚಂದಿರನ ಕೂಡಿಸಿರುವೆ!!
ಕಳೆಯದಿರೂ ಈ ಹೊತ್ತ..ಬರೆಯುವೆನು, ಒಡಲಾಳದಿ, ಹೆಕ್ಕಿ ತಂದ ಪದವ..
ಬರುವೆಯಾ, ನನ್ನ ಬೆಳದಿಂಗಳ ಬಾಲೆ.........ತೂಗೋಣ, ಪ್ರೀತಿ ಉಯ್ಯಾಲೆ...........

ಹೇಳಲಾಗದ ಮಾತು

ಆಡಿದ ಮಾತುಗಳು ,ನಿನ್ನ ನೆರಳಂತೆಯೇ ಇದೆ...
ಎಲ್ಲಿಯೇ ಹೋದರೂ, ನನ್ನನೇ ಹಿಂಬಾಲಿಸಿದೆ!!
ಲಂಬವಾಗಿ, ಧೀರ್ಘವಾಗಿ ನಿಲ್ಲುವ ಆ ನೆರಳ ಹೇಗೆ ತೊರೆಯಲಿ....

ಹಳೇ ನೆನಪುಗಳ ಜೋಡಿಸಿ, ಮಣಿಗಳಂತೆ ಪೋಣಿಸಿ ಇರಿಸಿರುವೆ..
ನೀರವ ರಾತ್ರಿಯಲಿ, ಥಮ್ಪೆನಿಸುವ ನಿನ್ನ ಎದೆಯ ಪಿಸುಮಾತ ಕೇಳಲು!!
ಕೇಳಿಸಲಾರೆಯ, ಆ ತರಂಗಗಳ ಅಲೆಯನ್ನ..ನಿನ್ನ ಅಭಿಮಾನಿ ಶ್ರೋತ್ರುವಿಗೆ??

ಬಹು ದಿನಗಳ ನಂತರ ಮತ್ತೆ ಕಲ್ಪನಾ ಲೋಕಕ್ಕೆ ಹೆಜ್ಜೆ ಇಟ್ಟಿರುವೆ..ಒಮ್ಮೆ ಇಣುಕಿ ಹೋಗಿ