Monday, June 15, 2009

ಮೆರವಣಿಗೆ ...........


ಮರೆತ ಆ ದಿನಗಳ,
ನೆನಪಿಸೋ
ಗಡಿಯಾರ ನೋಡಿ... ಮರೆತಿಲ್ಲ ಯಾವುದೇ ಗಡಿಗಳ....................

ಕಳೆದ
ದಾರಿಗೆ, ಬಾಲ್ಯ ಎನ್ನಬಹುದೇ?
ಬೆಳೆದ
ಕೇರಿಗೆ, ಕೋಟೆ ಅನ್ನ ಬಹುದೇ? ಎಲ್ಲ ಕಾವಲು ದಾಟಿ...................... ಬರಬಹುದೇ ಕನಸ ಊರಿಗೆ,
ಕಣ್ಣ
ಬಾಗಿಲ ತೆರೆಸದೇನೆ!!!!!!!!!!


ಕಂಡ ಹುಡುಗಿಗೆ,
ಚೆಲುವೆನ್ನ ಬಹುದೇ?
ಮೊಂಡ ಮನಸಿಗೆ,
ಚಾಟಿಯ ಬೀಸ ಬಹುದೇ?

ತುಂಬಿದ ಕಣ್ಣ ಹನಿಗೆ,
ಹೊರ ಬಾರದ ದುಃಖ...
ಮರೆತು ಹೋದ ಹೆಣ್ಣಿಗೆ,
ದೂರ ಸರಿದ ಮುಖ.....
ಮರೆತೆಯಲ್ಲಾ, ಸಾಕಿನ್ನು..ನೆನಪ ....................
ಮೆರವಣಿಗೆ >>...............

Sunday, June 14, 2009

ಅಮ್ಮ .........


ಅಳುವಾಗ ಅಮ್ಮ ನಿನ್ನ ನೆನಪೇ...
ಮಲಗೋ ಮುನ್ನ ನನ್ನೇ ಹರಸೇ..
ಬರದಿರಲಿ ಯಾವುದೇ ಭೀತಿ,
ಅದಕಿಂತ ಮಿಗಿಲಿಲ್ಲ ಯಾವುದೇ ಪ್ರೀತಿ...
ತೊಟ್ಟಿಲ್ಲಲ್ಲೇ ಮಲಗೋ..ಆಸೆ!!!!!!!!!!

ಹೊಸ ಕವನಗಳ ಬಿಡುಗಡೆ!!!!!!!!!!!!!

ಬದುಕಲಿ ಬಾಡದ ಹೂವ,
ಬೆಳೆಸುವ ಮಾಲಿಯೂ ಆಗಿ..
ಹದವ ಮಾಡದ, ಮಣ್ಣ ಮನಕೆ,
ಮೆದುವಾಗಿ ಗುದ್ದಲಿ ತಗಲಿ......

ನೋವೆ ಆದರೂ ಕೂಡ,
ಹೂವೆ ಬರುವಾಗ..ನೋಡಿ...
ಆಗಲೀ ಸಾವಿರ ಹೋರಾಟ!!!!!!!!!!!

ಗ.ಕಿರಣ್

Monday, April 13, 2009

ಕಾಲ..

ಕಾಲ ಕಳೆದು ಹೋಗುತಿದೆ,
ನನಗಾಗಿ ಕಾಯದೆ....
ನಾಳೆ ಎಂಬುದು, ಬರುತಲೇ ಇದೆ..
ಯಾವ ಕೊನೆಯೂ ಇಲ್ಲದೇ...

ನೆನ್ನೆ ಕಾದು ಕುಳಿತ..ಘಳಿಗೆ
ಇನ್ನೂ ಮರೆತು ಹೋಗಿಲ್ಲ...
ನೀನೆ ಬಂದು ಕರೆಯುವ..ಗಳಿಗೆ..
ಇನ್ನೂ ಬರಲೇ ಇಲ್ಲ............

ಕೂತು ಹೋದ..ಜಾಗ...ಮತ್ತೆ ಮತ್ತೆ
ಕೇಳಿದೆ....
ಮರೆತು ಬಂದೆ ಯಾಕೆ ಎಂದು...
ಮರಳಿ ಕಳಿಸಿದೆ....

ನಿನ್ನ ಬಿಟ್ಟು ಹೋಗೋ..ಆಸೆ...
ಹೋಗ್ಲಿ..ಬಾರೆಲೈ..................

ಗ ಕಿರಣ

Sunday, April 12, 2009

ಅಂದು ಕೊಂಡೆ!!!!!!!!!!

ಹುಡುಗ ಒಳ್ಳೆಯವ,
ಅಂದು ಕೊಂಡೆ......
ನೋಡಿದರೆ...ಹೃದಯವೋ....
ಕಲ್ಲು ಬಂಡೆ

ಪೂಜಿಸಲು ಗೊತ್ತಿಲ್ಲ ..
ಸೇವಿಸಲು..ಬರುತ್ತಿಲ್ಲ....
ಯಾಕೆ ಈ ರೀತಿಯೇ??????...
ಬೇಕಿಲ್ಲ.. ಅವನಿಗೆ....ಯಾವುದೇ...
ರಿಯಾಯಿತಿಯೇ....

ಗ . ಕಿರಣ

ಕಥೆ....

ನಾನೇ ಬರೆದ ಕಥೆಯು ಇಂದು.....

ಕೊನೆಗೆ ಬಂದು, ನಿಂತಿದೆ...

ವಿರಹವೋ, ಸನಿಹವೋ....

ನೋವನಂತೂ, ನೀಡಿದೆ...

ನಡೆದು ಬಂದ ದಾರಿ ...

ಯಾಕೋ, ಒಂಟಿಯಾಗಿ ಹೋಗಿದೆ,

ಮರಳಿ ಹೋಗೋ, ಆಸೆಯಾದರೂ...

ಸೇತುವೆಯೇ ಮುರಿದಿದೆ....

ಬರೆಯಲೇ, ಬೇಕು ..ಕೊನೆಯ ಸಾಲು...

ಮುಗಿಸಲೇ, ಬೇಕು..ಪಯಣದ..ಪಾಲು...

ನನಗೂ, ನಿನಗೂ, ಇಬ್ಬರಿಗೂ..

ಬರಲಿ ಹೊಸ ಊರು

ತರಲಿ..ಬದುಕಲಿ..

ನೆಮ್ಮದಿ ಚೂರು.....

ಗ . ಕಿರಣ

ನೀನೇ ಬರುವೆಯಾ?

ಕಣ್ಣು ಮುಚ್ಚಿ ಕಣೋ..ಕನಸು..
ಬೇಡ ನಂಗೆ..ಎಂದೂ ಗೆಳತಿ...

ನನ್ನ ಕದ್ದು ಮುಚ್ಚಿ..ಕಾಣೋ..ಹುಡುಗಿ..
ಬೇಕು, ನಂಗೆ..ಎಂದೂ..ಗೆಳತಿ..
ನೀನೇ ಬರುವೆಯಾ?...........

ಯಾವ ಹುಡುಗಿ ಮಾತು ಕೇಳಿ,
ಪ್ರೀತಿ ಮಾಡೋ ಹುಡುಗ ಅಲ್ಲ ನಾನು...
ನೀನು ಬಂದು..'ಕಾಡೋ' ಅಂತ....ಕೇಳುವಾಗ,
ಹೇಗೆ ಇರಲಿ..ನೀನೇ ...ಹೇಳು..........

ನೀನೇ ಬರುವೆಯಾ?.............................

ಎಂದೂ ಮರೆಯೋ, ಹಾಗೆ ಕಾಣೆ ನಾನು..
ನಾನೇ ಬರೆಯೋ, ಕವಿತೆ ಹಾಗೆ ನೀನು...
ಬೇಕೇ,ಇಂದೇ ಆಣೆ...ಕೇಳು..
ಯಾಕೆ ...ಅದು..ನೀನೇ...ಹೇಳು..
ನೀನೇ ಬರುವೆಯಾ?.............................

ಗ .ಕಿರಣ

ಸಂ- ದೇಶ

ಇನ್ನೆಂದು ಕಾಣದಂಗೆ...
ಮುಂದೆಂದೂ ...ನೋಡದಂಗೆ
ಮರೆಯಾಗುವೇನು ಗೆಳತಿ....
ಮರಣವಾಗುವೇನು, ಒಂದೇ..
ಸತಿ..................................

ಎದೆಯಾಳ ತೊರೆದು .....
ಮನದಾಳ ಬಿರಿದು!!
ಹೊರಟಿರುವೆನು..ಜೀವವೇ...
ಇನ್ನೆಂದೂ ಬಾರನೇ.......

ಕೆಲವು ದಿನದ ಗೆಳೆಯ....
ಹಲವು ಜನ್ಮದ ಗೆಳತಿ....
ವಿದಾಯ ನಿನಗೆ...ಹೃದಯ...
ಎನಗೆ....

ಕೊನೆಯ ಸಂ-ದೇಶ..........ಕೊನೆಗಾಣುವ ಮುನ್ನ....
ಗ . ಕಿರಣ

Saturday, April 11, 2009

ಸಾಂತ್ವಾನ

ದಣಿದ ದೇಹಕ್ಕೆ ಪಾನೀಯದ..
ಸಾಂತ್ವಾನ ……….
ದಣಿದ ಮನಕ್ಕೆ , ಅವಳ
ಪ್ರೀತಿಯ ಸಾಂತ್ವಾನ …….

ಜ್ಯೂಸ್ ಇಲ್ಲದಿರೆ , ನೀರೆ ಸಾಕು …
ಕಾಸ್ ಇಲ್ಲದಿದ್ದರೂ ..ಅವಳಿಗೆ
ಸೀರೆಯೇ ಬೇಕು …

ಅದಕಾಗಿ ಎಲ್ಲ ,ನನಗಾಗಿ ಅಲ್ಲ ………
ನಾನೇನು ಅವಳ ಸ್ವಂತಾನ??????
ಅಥವಾ
ಸಂತ -ನ !!!!!!!!!!!!!!!!!!!!

ಗ . ಕಿರಣ

ಅಸ್ತ್ರ

ಹೆಣ್ಣಿಗೆ ಕಣ್ಣೀರು..
ಪ್ರಮುಖ ಅಸ್ತ್ರ...
ಗಂಡು????ಅದನ್ನೊರೆಸುವ
ಕರ-ವಸ್ತ್ರ ......


ಗ . ಕಿರಣ